ABB ನೀತಿ ಸಂಹಿತೆ

ನಮ್ಮ ಕಾರ್ಯಕಾರಿ ಸಮಿತಿಯ ಸಂದೇಶ

ಜಾಗತಿಕ ತಂತ್ರಜ್ಞಾನ ಕಂಪನಿಯಾಗಿ, ನಾವು ಕೈಗಾರಿಕೆಗಳಿಗೆ ಉನ್ನತ ಕಾರ್ಯಕ್ಷಮತೆಯೊಂದಿಗೆ ಕಾರ್ಯನಿರ್ವಹಿಸಲು, ಹೆಚ್ಚು ಉತ್ಪಾದಕ, ಪರಿಣಾಮಕಾರಿ ಮತ್ತು ಸುಸ್ಥಿರವಾಗಲು ಸಹಾಯ ಮಾಡುತ್ತೇವೆ, ಇದರಿಂದ ಅವುಗಳು ಇನ್ನಷ್ಟು ಉತ್ತಮವಾಗಿ ಸಾಧಿಸಬಹುದು.

ಯಶಸ್ಸನ್ನು ಸಾಧಿಸಲು, ಧೈರ್ಯ, ಕಾಳಜಿ, ಕುತೂಹಲ ಮತ್ತು ಸಹಕಾರ ಎಂಬ ನಮ್ಮ ಮೌಲ್ಯಗಳ ಮೇಲೆ ನಿರ್ಮಿತವಾದ ಉನ್ನತ ಕಾರ್ಯಕ್ಷಮತೆ ಮತ್ತು ಉನ್ನತ ನೈತಿಕತೆಯ ಸಂಸ್ಕೃತಿಯಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ. ಅದರರ್ಥ, ನಾವು ಕೇವಲ ಉತ್ತಮ ಕೆಲಸ ಮಾಡುವುದನ್ನೇ ಗುರಿಯಾಗಿಸಿಕೊಳ್ಳುವುದಿಲ್ಲ; ಅದನ್ನು ಸರಿಯಾದ ರೀತಿಯಲ್ಲಿ ಮಾಡುವುದನ್ನೂ ಖಚಿತಪಡಿಸುತ್ತೇವೆ. ನಾವು ಕೈಗೊಳ್ಳುವ ಪ್ರತಿಯೊಂದು ನಿರ್ಧಾರ ಮತ್ತು ಕ್ರಮವೂ ನಮ್ಮ ಮೌಲ್ಯಗಳು ಹಾಗೂ ನೈತಿಕತೆ, ಹೊಣೆಗಾರಿಕೆ ಮತ್ತು ಪಾರದರ್ಶಕತೆಯ ಮೇಲಿನ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸಬೇಕು.

ನಮ್ಮ ನೀತಿ ಸಂಹಿತೆ ABBಗಾಗಿ ಅಥವಾ ABB ಜೊತೆಗೆ ಕೆಲಸ ಮಾಡುವ ಪ್ರತಿಯೊಬ್ಬರಿಂದ ನಾವು ನಿರೀಕ್ಷಿಸುವ ಮಾನದಂಡಗಳನ್ನು ನಿರ್ಧರಿಸುತ್ತದೆ. ಇದು ನಮಗೆ ಸರಿಯಾದ ನಿರ್ಧಾರಗಳನ್ನು ಕೈಗೊಳ್ಳಲು ಸಹಾಯ ಮಾಡುತ್ತದೆ. ನಾವು ಕಾರ್ಯನಿರ್ವಹಿಸುವ ಸಮುದಾಯಗಳ ಉದ್ಯೋಗಿಗಳು, ಗುತ್ತಿಗೆದಾರರು, ಗ್ರಾಹಕರು, ಪಾಲುದಾರರು ಅಥವಾ ಇತರ ಹಿತಾಸಕ್ತಿಪಕ್ಷಗಳು ಯಾರೇ ಆಗಿರಲಿ, ಪ್ರತಿಯೊಬ್ಬರೂ ಗೌರವಿತ, ಸುರಕ್ಷಿತ ಮತ್ತು ಒಳಗೊಂಡಂತೆ ಭಾಸವಾಗುವ ಕೆಲಸದ ವಾತಾವರಣಕ್ಕೆ ಇದು ಬೆಂಬಲ ನೀಡುತ್ತದೆ. ಜೊತೆಗೆ, ನಮ್ಮ ನೀತಿ ಸಂಹಿತೆ, ABB ನೀತಿಗಳು ಅಥವಾ ಕಾನೂನಿನ ನಿಜವಾದ ಅಥವಾ ಸಂಭವನೀಯ ಉಲ್ಲಂಘನೆ ಇದೆ ಎಂದು ಯುಕ್ತಿಯುಕ್ತವಾಗಿ ಭಾಸವಾದಾಗ, ಪರಸ್ಪರರನ್ನೂ ABBಯನ್ನೂ ರಕ್ಷಿಸಲು ನಾವು ಧೈರ್ಯವಾಗಿ ಮಾತು ಹೇಳಲು ಇದು ನಮ್ಮನ್ನು ಸಬಲಗೊಳಿಸುತ್ತದೆ.

ಪ್ರತಿದಿನವೂ ನಮ್ಮ ನೀತಿ ಸಂಹಿತೆ ಮತ್ತು ಮೌಲ್ಯಗಳಿಗೆ ಅನುಗುಣವಾಗಿ ನಡೆದು, ABB ಮತ್ತು ನಮ್ಮ ಗ್ರಾಹಕರು ಯಶಸ್ವಿಯಾಗಲು ನಾವು ಸಹಾಯ ಮಾಡುತ್ತೇವೆ ಹಾಗೂ ಹೆಚ್ಚು ಸುಸ್ಥಿರ ಮತ್ತು ಸಂಪನ್ಮೂಲ-ದಕ್ಷ ಭವಿಷ್ಯವನ್ನು ಸಾಧ್ಯವಾಗಿಸುವ ನಮ್ಮ ಉದ್ದೇಶಕ್ಕೆ ಕೊಡುಗೆ ನೀಡುತ್ತೇವೆ.

ಕಾರ್ಯಕಾರಿ ಸಮಿತಿ

ನಮ್ಮ ನೀತಿ ಸಂಹಿತೆ – ಒಂದು ನೋಟದಲ್ಲ

ಸಮಗ್ರತೆಯಿಂದ ನಡೆದುಕೊಳ್ಳಿ

ನಾವು ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತೇವೆ, ಪಾರದರ್ಶಕವಾಗಿರುತ್ತೇವೆ ಮತ್ತು ನಮ್ಮ ನಿರ್ಧಾರಗಳು ಹಾಗೂ ಕ್ರಮಗಳಿಗೆ ಹೊಣೆ ಹೊರುತ್ತೇವೆ. ನಮ್ಮ ಮೌಲ್ಯಗಳು ಮತ್ತು ಬದ್ಧತೆಗಳನ್ನು ಹಂಚಿಕೊಳ್ಳುವ ಪಾಲುದಾರರೊಂದಿಗೆ ಮಾತ್ರ ಕೆಲಸ ಮಾಡುತ್ತೇವೆ.

ನಾವು ಎಂದಿಗೂ ಮೋಸ, ಲಂಚ ಅಥವಾ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಮತ್ತು ಅದರಲ್ಲಿ ತೊಡಗುವುದಿಲ್ಲ.

ನಮ್ಮ ವೈಯಕ್ತಿಕ ಹಿತಾಸಕ್ತಿಗಳು ABB ಯ ಹಿತಾಸಕ್ತಿಗಳೊಂದಿಗೆ ಸಂಘರ್ಷಿಸಬಹುದಾದ ಸಂದರ್ಭಗಳನ್ನು ನಾವು ತಪ್ಪಿಸುತ್ತೇವೆ ಮತ್ತು ಅಗತ್ಯವಿದ್ದಲ್ಲಿ ಬಹಿರಂಗಪಡಿಸುತ್ತೇವೆ.

ನಾವು ನ್ಯಾಯಸಮ್ಮತವಾಗಿ ಮತ್ತು ಸ್ವತಂತ್ರವಾಗಿ ಸ್ಪರ್ಧಿಸುತ್ತೇವೆ ಹಾಗೂ ಎಲ್ಲಾ ಆಂಟಿ-ಟ್ರಸ್ಟ್ ಮತ್ತು ನ್ಯಾಯಸಮ್ಮತ ಸ್ಪರ್ಧೆಯ ಕಾನೂನುಗಳನ್ನು ಪಾಲಿಸುತ್ತೇವೆ.

ನಾವು ಜಾಗತಿಕ ವ್ಯಾಪಾರ ಮತ್ತು ನಿರ್ಬಂಧಗಳ ಅವಶ್ಯಕತೆಗಳನ್ನು ಪಾಲಿಸುತ್ತೇವೆ.

ABB ಯ ವ್ಯವಹಾರಿಕ ಉದ್ದೇಶಗಳನ್ನು ಬೆಂಬಲಿಸಲು ನಾವು ಸರ್ಕಾರಗಳೊಂದಿಗೆ ಸಂಪರ್ಕ ಹೊಂದುತ್ತೇವೆ.

ನಾವು ಜನರ ಬಗ್ಗೆ ಮತ್ತು ನಮ್ಮ ಗ್ರಹದ ಬಗ್ಗೆ ಕಾಳಜಿ ವಹಿಸುತ್ತೇವೆ. ನಾವು ಇನ್ನಷ್ಟು ಸುರಕ್ಷಿತ ಮತ್ತು ಎಲ್ಲರನ್ನು ಒಳಗೊಂಡ ಕೆಲಸದ ಸ್ಥಳಗಳನ್ನು ನಿರ್ಮಿಸುತ್ತೇವೆ, ಮಾನವ ಹಕ್ಕುಗಳನ್ನು ಗೌರವಿಸುತ್ತೇವೆ, ಪರಿಸರದ ಮೇಲೆ ಇರುವ ಪರಿಣಾಮವನ್ನು ಕಡಿಮೆ ಮಾಡಲು ಕೆಲಸ ಮಾಡುತ್ತೇವೆ ಮತ್ತು ನಾವು ಕಾರ್ಯನಿರ್ವಹಿಸುವ ಸಮುದಾಯಗಳಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುತ್ತೇವೆ.

ನಾವು ವೈವಿಧ್ಯಮಯ ಕೆಲಸದ ಸ್ಥಳ ಮತ್ತು ಎಲ್ಲರನ್ನು ಒಳಗೊಂಡ ಸಂಸ್ಕೃತಿಯನ್ನು ಮೌಲ್ಯೀಕರಿಸುತ್ತೇವೆ.

ನಾವು ಪರಿಸರದ ಮೇಲೆ ನಮ್ಮ ಪರಿಣಾಮವನ್ನು ಕಡಿಮೆ ಮಾಡಲು ಮತ್ತು ಕಡಿಮೆ-ಕಾರ್ಬನ್ ಭವಿಷ್ಯಕ್ಕೆ ಕೊಡುಗೆ ನೀಡಲು ಕೆಲಸ ಮಾಡುತ್ತೇವೆ.

ಇನ್ನಷ್ಟು ಸುರಕ್ಷಿತ ಕೆಲಸದ ಸ್ಥಳಗಳನ್ನು ನಿರ್ಮಿಸಿ ಉಳಿಸಿಕೊಳ್ಳಲು, ನಾವು ಸುರಕ್ಷತೆಯನ್ನು ಮಹತ್ವದಿಂದ ತೆಗೆದುಕೊಳ್ಳುತ್ತೇವೆ ಮತ್ತು ಅಪಾಯಗಳ ಬಗ್ಗೆ ತೆರೆದ ಮನಸ್ಸಿನಿಂದ ಮಾತನಾಡುತ್ತೇವೆ.

ನಾವು ಕಾರ್ಯನಿರ್ವಹಿಸುವ ಸಮುದಾಯಗಳಲ್ಲಿ ಸಕಾರಾತ್ಮಕ ಪ್ರಭಾವ ಬೀರುವುದಕ್ಕೆ ನಾವು ಪ್ರಯತ್ನಿಸುತ್ತೇವೆ.

ನಾವು ಜಾಗತಿಕವಾಗಿ ನಮ್ಮ ವ್ಯವಹಾರದಲ್ಲಿ ಮಾನವ ಹಕ್ಕುಗಳು ಮತ್ತು ಕಾರ್ಮಿಕ ಮಾನದಂಡಗಳನ್ನು ಬೆಂಬಲಿಸುತ್ತೇವೆ ಮತ್ತು ಗೌರವಿಸುತ್ತೇವೆ.

ಸೂಕ್ಷ್ಮ ಮಾಹಿತಿ, ಬೌದ್ಧಿಕ ಆಸ್ತಿ, ವೈಯಕ್ತಿಕ ಮಾಹಿತಿ

ಮತ್ತು ಕೆಲಸದ ಸಾಧನಗಳಂತಹ ಕಂಪನಿಯ ಆಸ್ತಿಗಳನ್ನು ದುರುಪಯೋಗ, ಕಳವು, ನಷ್ಟ ಅಥವಾ ಹಾನಿಯಿಂದ ರಕ್ಷಿಸುವ ಜವಾಬ್ದಾರಿ ನಮ್ಮದೆ.

ನಾವು ಎಲ್ಲಾ ರಹಸ್ಯ ಮಾಹಿತಿಯನ್ನೂ ಮತ್ತು ಬೌದ್ಧಿಕ ಆಸ್ತಿಯನ್ನೂ ರಕ್ಷಿಸುತ್ತೇವೆ ಮತ್ತು ಇತರರಿಂದಲೂ ಅದನ್ನೇ ನಿರೀಕ್ಷಿಸುತ್ತೇವೆ.

ನಾವು ವೈಯಕ್ತಿಕ  ಮಾಹಿತಿಯನ್ನು ಕಾಳಜಿಯಿಂದ ನಿರ್ವಹಿಸಿ ರಕ್ಷಿಸುತ್ತೇವೆ ಮತ್ತು ಇತರರಿಂದಲೂ ಅದನ್ನೇ ನಿರೀಕ್ಷಿಸುತ್ತೇವೆ.

ABB ಅಥವಾ ಯಾವುದೇ ಇತರ ಕಂಪನಿಯ ಆಂತರಿಕ ಮಾಹಿತಿಯನ್ನು ನಾವು ವೈಯಕ್ತಿಕ ಲಾಭಕ್ಕಾಗಿ ಬಳಸುವುದಿಲ್ಲ.

ನಿಯಮಗಳು ಮತ್ತು ಲೆಕ್ಕಪತ್ರ ತತ್ವಗಳಿಗೆ ಅನುಗುಣವಾಗಿ, ನಮ್ಮ ಹಣಕಾಸು ಮಾಹಿತಿಯನ್ನು ನಾವು ನಿಖರವಾಗಿ ಮತ್ತು ಪಾರದರ್ಶಕವಾಗಿ ದಾಖಲಿಸಿ ವರದಿ ಮಾಡುತ್ತೇವೆ.

ABB ಬ್ರ್ಯಾಂಡ್ ಅನ್ನು ಬಲಪಡಿಸಲು ಮತ್ತು ABB ಯ ಪ್ರತಿಷ್ಠೆಯನ್ನು ರಕ್ಷಿಸಲು ನಾವು ಸಂವಹನ ಮಾಡುತ್ತೇವೆ.

ನಾವು ಮಾಹಿತಿ ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸುತ್ತೇವೆ.

ಉದ್ಯೋಗಿಗಳು ಮತ್ತು ಹಿತಾಸಕ್ತಿಪಕ್ಷಗಳು ನೇರ ಸಂಭಾಷಣೆಯಲ್ಲಿ ತೊಡಗಿ, ತಮ್ಮ ಮಾತು ಹೇಳಲು ಸುರಕ್ಷಿತವೆಂದು ಭಾಸವಾಗುವ ತೆರೆದ ಮತ್ತು ಪಾರದರ್ಶಕ ಸಂಸ್ಕೃತಿಗೆ ABB ಬದ್ಧವಾಗಿದೆ. Speak Up ವರದಿಗೆ ಸಂಬಂಧಿಸಿದ ಪ್ರತೀಕಾರದ ವಿರುದ್ಧ ನಾವು ಶೂನ್ಯ ಸಹಿಷ್ಣುತೆಯನ್ನು ಹೊಂದಿದ್ದೇವೆ.

ತೆರೆದ ಸಂಭಾಷಣೆ – ನಿಮ್ಮ ದೈನಂದಿನ ಕೆಲಸದಲ್ಲಿ, ಅಸೌಕರ್ಯಕರ ವಿಷಯಗಳಿದ್ದರೂ ಸಹ, ಪ್ರಶ್ನೆಗಳನ್ನು ಕೇಳಲು, ನೇರ ಚರ್ಚೆಗಳಲ್ಲಿ ಭಾಗವಹಿಸಲು ಮತ್ತು ನಿಮ್ಮ ಆಲೋಚನೆಗಳು ಹಾಗೂ ಕಳವಳಗಳನ್ನು ಹಂಚಿಕೊಳ್ಳಲು ನಿಮಗೆ ಅಧಿಕಾರ ನೀಡಲಾಗಿದೆ. ನೇರ ಸಂಭಾಷಣೆಯಿಂದ ಪರಿಸ್ಥಿತಿ ಪರಿಹಾರವಾಗದಿದ್ದರೆ, ನಿಮ್ಮ ಲೈನ್ ಮ್ಯಾನೇಜರ್ ಅಥವಾ HR Business Partner (HRBP)ರಿಂದ ಸಲಹೆ ಅಥವಾ ಬೆಂಬಲವನ್ನು ಪಡೆಯಬೇಕು.

Speak Up – ನೀತಿ ಸಂಹಿತೆ, ABB ನೀತಿಗಳು ಅಥವಾ ಕಾನೂನಿನ ಉಲ್ಲಂಘನೆಗಳನ್ನು ABB Speak Up Helpline ಅಥವಾ ಇತರೆ ವರದಿ ಮಾರ್ಗಗಳ ಮೂಲಕ ತಿಳಿಸಿ. ನೀವು ಪ್ರಾಮಾಣಿಕವಾಗಿ ಕಳವಳ ಅಥವಾ ಉಲ್ಲಂಘನೆಯನ್ನು ವರದಿ ಮಾಡಿದರೆ, ಅಥವಾ ತನಿಖೆಯಲ್ಲಿ ಸತ್ಯನಿಷ್ಠೆಯಿಂದ ಭಾಗವಹಿಸಿದರೆ, ಪ್ರತೀಕಾರದಿಂದ ನಿಮ್ಮನ್ನು ರಕ್ಷಿಸಲಾಗುತ್ತದೆ.

ನಮ್ಮ ನೀತಿ ಸಂಹಿತೆಯ ಉದ್ದೇಶ

ನಮಗೆ ನೀತಿ ಸಂಹಿತೆ ಏಕೆ ಇದೆ?

ನಮ್ಮ ನೀತಿ ಸಂಹಿತೆ ABBಗಾಗಿ ಅಥವಾ ABB ಜೊತೆಗೆ ಕೆಲಸ ಮಾಡುವ ಪ್ರತಿಯೊಬ್ಬರಿಂದ ನಾವು ನಿರೀಕ್ಷಿಸುವ ಮಾನದಂಡಗಳನ್ನು ನಿರ್ಧರಿಸುತ್ತದೆ ಮತ್ತು ಸರಿಯಾದ ನಿರ್ಧಾರಗಳನ್ನು ಕೈಗೊಳ್ಳಲು ನಮಗೆ ಸಹಾಯ ಮಾಡುತ್ತದೆ. ಇದು ನಮಗೆ ಆಲೋಚನೆಗಳನ್ನು ಹಂಚಿಕೊಳ್ಳಲು, ಪ್ರಶ್ನೆಗಳನ್ನು ಕೇಳಲು ಮತ್ತು ಏನಾದರೂ ಸರಿಯಿಲ್ಲವೆಂದು ಕಂಡಾಗ ಮಾತನ್ನು ಹೇಳಲು ಸಬಲಗೊಳಿಸುತ್ತದೆ. ಇದು ನಮ್ಮ ಎಲ್ಲಾ ನೀತಿಗಳ ಮೂಲಸ್ತಂಭವಾಗಿದ್ದು, ಪ್ರಾಯೋಗಿಕವಾಗಿ ನಮ್ಮ ನೀತಿ ಸಂಹಿತೆ ಹೇಗೆ ಅನ್ವಯಿಸುತ್ತದೆ ಎಂಬುದರ ಬಗ್ಗೆ ಹೆಚ್ಚುವರಿ ಸ್ಪಷ್ಟತೆಯನ್ನು ಒದಗಿಸುತ್ತದೆ. ನಮ್ಮ ದೈನಂದಿನ ಕೆಲಸದಲ್ಲಿ ನಮ್ಮ ನೀತಿ ಸಂಹಿತೆ ಮತ್ತು ನೀತಿಗಳನ್ನು ಅನುಸರಿಸುವ ಮೂಲಕ, ನಾವು ನೈತಿಕತೆಯೊಂದಿಗೆ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಉನ್ನತ ಕಾರ್ಯಕ್ಷಮತೆಯ ಸಂಸ್ಕೃತಿಯನ್ನು ಮತ್ತಷ್ಟು ಬಲಪಡಿಸುತ್ತೇವೆ.

ನಮ್ಮ ನೀತಿ ಸಂಹಿತೆ ಯಾರಿಗಾಗಿ?

ನಮ್ಮ ನೀತಿ ಸಂಹಿತೆ ABBಯ ಎಲ್ಲಾ ಉದ್ಯೋಗಿಗಳು, ವ್ಯವಸ್ಥಾಪಕರು, ಅಧಿಕಾರಿಗಳು ಮತ್ತು ನಿರ್ದೇಶಕರಿಗೆ ಅನ್ವಯಿಸುತ್ತದೆ. ಇದರಲ್ಲಿ ABBಯ ಸಂಪೂರ್ಣ ಮಾಲೀಕತ್ವದ ಅಂಗಸಂಸ್ಥೆಗಳು ಮತ್ತು ಉಪಕಂಪನಿಗಳಲ್ಲಿರುವವರು, ಹಾಗೆಯೇ ABBಗೆ ಬಹುಪಾಲು ಮಾಲೀಕತ್ವದ ಹಿತಾಸಕ್ತಿ ಇರುವ ಅಥವಾ ಪರಿಣಾಮಕಾರಿ ನಿಯಂತ್ರಣವನ್ನು ವಹಿಸಿರುವ ಯಾವುದೇ ಸಂಯುಕ್ತ ಉಪಕ್ರಮದಲ್ಲಿರುವವರು ಒಳಗೊಂಡಿದ್ದಾರೆ. ನಮ್ಮ ಪಾಲುದಾರರು ಮತ್ತು ತಾತ್ಕಾಲಿಕ ಕಾರ್ಯಕರ್ತರೂ ಸಹ ನಮ್ಮ ನೀತಿ ಸಂಹಿತೆಯಲ್ಲಿ ವಿವರಿಸಿರುವ ಮಾನದಂಡಗಳನ್ನು ಪಾಲಿಸುವರೆಂದು ನಾವು ನಿರೀಕ್ಷಿಸುತ್ತೇವೆ; ಪೂರೈಕೆದಾರರ ವಿಷಯದಲ್ಲಿ, ನಮ್ಮ ಮಾನವ ಹಕ್ಕುಗಳ ನೀತಿ ಮತ್ತು ಪೂರೈಕೆದಾರರ ನೀತಿ ಸಂಹಿತೆಯನ್ನೂ ಸಹ ಪಾಲಿಸಬೇಕೆಂದು ನಿರೀಕ್ಷಿಸುತ್ತೇವೆ.

ನಮ್ಮಿಂದ ಏನು ನಿರೀಕ್ಷಿಸಲಾಗಿದೆ?

ನಾವು ಎಲ್ಲರೂ ನಮ್ಮ ನೀತಿ ಸಂಹಿತೆ, ನೀತಿಗಳು ಮತ್ತು ಕಾನೂನನ್ನು ಅರ್ಥಮಾಡಿಕೊಂಡು ಅವನ್ನು ಪಾಲಿಸಬೇಕಾಗಿದೆ. ನಿಯಮಗಳ ನಡುವೆ ಸಂಘರ್ಷ ಉಂಟಾದರೆ, ಅತ್ಯಂತ ಕಠಿಣ ಮಾನದಂಡವೇ ಅನ್ವಯಿಸುತ್ತದೆ. ನಮ್ಮ ನೀತಿ ಸಂಹಿತೆ, ನೀತಿಗಳು ಮತ್ತು ಕಾನೂನನ್ನು ಅರ್ಥಮಾಡಿಕೊಳ್ಳಲು ABB ನಿರಂತರ ಅಧ್ಯಯನ ಮತ್ತು ತರಬೇತಿಯನ್ನು ಒದಗಿಸುತ್ತದೆ. ಹೊಣೆಗಾರಿಕೆ ಮತ್ತು ಪಾರದರ್ಶಕತೆಯ ಸಂಸ್ಕೃತಿಯನ್ನು ನಿರ್ಮಿಸುವಲ್ಲಿ, ಮುಕ್ತ ಸಂಭಾಷಣೆಗೆ ಉತ್ತೇಜನ ನೀಡುವಲ್ಲಿ ಹಾಗೂ ಸರಿಯಾದ ನಡವಳಿಕೆಗೆ ಮಾದರಿಯಾಗುವಲ್ಲಿ ವ್ಯವಸ್ಥಾಪಕರು ಪ್ರಮುಖ ಪಾತ್ರವಹಿಸುತ್ತಾರೆ. ನಮ್ಮ ನೀತಿ ಸಂಹಿತೆ, ನೀತಿಗಳು ಅಥವಾ ಕಾನೂನಿನ ಯಾವುದೇ ಅಂಶದ ಬಗ್ಗೆ ನಮಗೆ ಸ್ಪಷ್ಟತೆ ಇಲ್ಲದಿದ್ದರೆ ಅಥವಾ ಸಂದೇಹ ಇದ್ದರೆ, ಸ್ಪಷ್ಟತೆ ಪಡೆಯಲು ನಾವು ಪ್ರಶ್ನೆಗಳನ್ನು ಕೇಳುತ್ತೇವೆ. ಯಾವಾಗಲಾದರೂ ಒಂದು ನಿರ್ಧಾರದ ಬಗ್ಗೆ ಒತ್ತಡ ಅಥವಾ ಅನಿಶ್ಚಿತತೆ ಅನುಭವಿಸಿದರೆ, ಕ್ಷಣಕಾಲ ನಿಲ್ಲಿಸಿ ನಾವು ನಮ್ಮನ್ನೇ ಹೀಗೆ ಕೇಳಿಕೊಳ್ಳಬೇಕು:

ಇದು ಕಾನೂನಸಮ್ಮತವೇ?

ಇದು ನೈತಿಕವೇ?

ಇದು ನಿಜವಾಗಿಯೂ ಸರಿಯೇ?

ನಮ್ಮ ನೀತಿ ಸಂಹಿತೆ ಉಲ್ಲಂಘಿಸಲ್ಪಟ್ಟರೆ ಏನು?

ನಮ್ಮ ನೀತಿ ಸಂಹಿತೆ, ನೀತಿಗಳು ಅಥವಾ ಕಾನೂನಿನ ಉಲ್ಲಂಘನೆಗಳು ಜನರನ್ನು, ನಮ್ಮ ವ್ಯವಹಾರವನ್ನು ಮತ್ತು ನಮ್ಮ ಪ್ರತಿಷ್ಠೆಯನ್ನು ಅಪಾಯಕ್ಕೆ ಒಳಪಡಿಸಬಹುದು. ಈ ಕಾರಣದಿಂದ, ವರದಿಯಾದ ಉಲ್ಲಂಘನೆಗಳನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರವಾಗಿ ಪರಿಶೀಲಿಸಲಾಗುತ್ತದೆ. ಪರಿಸ್ಥಿತಿಯನ್ನು ಅವಲಂಬಿಸಿ, ಪರಿಣಾಮಗಳು ಮಾರ್ಗದರ್ಶನ ಮತ್ತು ಕೋಚಿಂಗ್‌ನಿಂದ ಆರಂಭಿಸಿ, ಶಿಸ್ತು ಕ್ರಮಗಳವರೆಗೆ, ಉದ್ಯೋಗವನ್ನು ಅಂತ್ಯಗೊಳಿಸುವುದನ್ನೂ ಒಳಗೊಂಡಿರಬಹುದು.